ಅನಂತಪದ್ಮನಾಭ
	
ಭಾದ್ರಪದ ಶುಕ್ಲಪಕ್ಷ ಚತುರ್ದಶಿ ದಿವಸ ಈ ದೇವರ ವ್ರತವನ್ನು ಆಚರಿಸುತ್ತಾರೆ. ವ್ರತಾಚರಣೆಯ ಕೊನೆಯಲ್ಲಿ ಕೈಗೆ ಕಟ್ಟಿಕೊಳ್ಳುವ ಹದಿನಾಲ್ಕು ಗಂಟುಗಳುಳ್ಳ ಕೆಂಪು ರೇಷ್ಮೆದಾರಕ್ಕೆ ಅನಂತ ಎಂದು ಹೆಸರು. ಅರಣ್ಯವಾಸಿಗಳಾಗಿ ದುಃಖಾರ್ತರಾದ ಪಾಂಡವರ ಬಳಿಗೆ ಶ್ರೀಕೃಷ್ಣ ದುಃಖಿ ಧರ್ಮರಾಯನಿಗೆ ಹೇಳಿದ ವ್ರತವೆಂದು ಭವಿಷ್ಯೋತ್ತರ ಪುರಾಣದಲ್ಲಿ ಹೇಳಿದೆ. ಈ ವ್ರತಾಚರಣೆಯಿಂದ ಇಹದಲ್ಲಿ ಅಷ್ಟೈಶ್ವರ್ಯಗಳೂ ಪರದಲ್ಲಿ ಮುಕ್ತಿಯೂ ದೊರಕುವುದು. ತಿರುವಹಿಂದ್ರಂ ಅನಂತಪದ್ಮನಾಭಸ್ವಾಮಿಯ ಪ್ರಸಿದ್ಧ ಪುರಾತನ ಕ್ಷೇತ್ರ. ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನಿಗೆ ಸಂಬಂಧಿಸಿದಂತೆ ಜೈನರೂ ಅನಂತವ್ರತವನ್ನು ಆಚರಿಸುತ್ತಾರೆ.											
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ